NLSIU Recruitment 2026: ಬೆಂಗಳೂರಿನಲ್ಲಿ ಲೈಬ್ರರಿ ಟ್ರೈನಿ ಹುದ್ದೆ; ಫ್ರೆಶರ್ಸ್ಗೂ ಅವಕಾಶ, ತಿಂಗಳಿಗೆ ₹20,000 ವೇತನ!
ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಉಪಯುಕ್ತ ಉದ್ಯೋಗಾವಕಾಶವಿದೆ. ಅದರಲ್ಲೂ ಲೈಬ್ರರಿ ಅಂಡ್ ಇನ್ಫರ್ಮೇಷನ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ, ಉತ್ತಮ ಸಂಸ್ಥೆಯಲ್ಲಿ ಕೆಲಸದ ಅನುಭವ ಪಡೆಯಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿ ಗಮನ ಸೆಳೆಯಬಹುದು. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU) ತನ್ನ ಗ್ರಂಥಾಲಯದಲ್ಲಿ ಖಾಲಿ ಇರುವ ಒಂದು ಲೈಬ್ರರಿ ಟ್ರೈನಿ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಯ ವಿಶೇಷತೆ ಏನೆಂದರೆ, ಹಿಂದಿನ ಉದ್ಯೋಗದ ಅನುಭವ ಕಡ್ಡಾಯವಿಲ್ಲ. ಅರ್ಹ ಹೊಸ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು … Read more