ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಶುರುವಾಯ್ತು ಚಳಿಯ ಅಬ್ಬರ! ದಾವಣಗೆರೆಯಲ್ಲಿ 12.8°Cಗೆ ಕುಸಿದ ತಾಪಮಾನ
ಬೆಂಗಳೂರು, ಅಕ್ಟೋಬರ್ 29: ಕರ್ನಾಟಕದಲ್ಲಿ ಮಳೆಗಾಲದ ಅಬ್ಬರ ಕಡಿಮೆಯಾಗಿದ್ದು, ಇದೀಗ ಬಹುತೇಕ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿದಿದೆ. ಇದರ ನಡುವೆಯೇ ಕೆಲವು ಪ್ರದೇಶಗಳಲ್ಲಿ ಮುಂಜಾನೆ ಮತ್ತು ರಾತ್ರಿ ಚಳಿಯ ಅನುಭವ ಹೆಚ್ಚಾಗತೊಡಗಿದೆ. ವಿಶೇಷವಾಗಿ ದಾವಣಗೆರೆಯಲ್ಲಿ ಕನಿಷ್ಠ ತಾಪಮಾನ 12.8 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿರುವುದು ಗಮನ ಸೆಳೆದಿದೆ. ಇನ್ನೊಂದೆಡೆ, ಕರಾವಳಿ ಭಾಗದ ಹೊನ್ನಾವರದಲ್ಲಿ ಗರಿಷ್ಠ ತಾಪಮಾನ 36.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಜ್ಯದಲ್ಲಿ ಒಂದೆಡೆ ಬೆಳಗಿನ ಜಾವ ಚಳಿಯ ವಾತಾವರಣ ಕಂಡುಬರುತ್ತಿದ್ದರೆ, ಮತ್ತೊಂದೆಡೆ ಹಗಲಿನಲ್ಲಿ ಬಿಸಿಲಿನ ತೀವ್ರತೆಯೂ ಅನುಭವಕ್ಕೆ … Read more