BMTC ಬಸ್ ಟಿಕೆಟ್ ದರ ಏರಿಕೆ: ನವೆಂಬರ್ 5ರಿಂದ ಹೊಸ ದರ ಜಾರಿ; ಏರ್‌ಪೋರ್ಟ್ ಬಸ್ ಟಿಕೆಟ್ ₹425ಕ್ಕೆ ಏರಿಕೆ, ಸಂಪೂರ್ಣ ದರಪಟ್ಟಿ ಇಲ್ಲಿದೆ!
ಬೆಂಗಳೂರು: ಬೆಂಗಳೂರಿನಲ್ಲಿ ಪ್ರತಿದಿನ ಬಿಎಂಟಿಸಿ ಬಸ್‌ಗಳನ್ನು ಅವಲಂಬಿಸಿ ಪ್ರಯಾಣಿಸುವ ಲಕ್ಷಾಂತರ ಜನರಿಗೆ ಮಹತ್ವದ ಸುದ್ದಿ ಹೊರಬಿದ್ದಿದೆ. ದಿನನಿತ್ಯದ ಕೆಲಸ, ಕಾಲೇಜು, ಕಚೇರಿ ಹಾಗೂ ಇತರ ಅಗತ್ಯಗಳಿಗಾಗಿ ಬಸ್ ಪ್ರಯಾಣ ಮಾಡುವವರಿಗೆ ಇನ್ಮುಂದೆ ಹೆಚ್ಚಿನ ಹಣ ಖರ್ಚು ಮಾಡಬೇಕಾಗಲಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಾಮಾನ್ಯ ಬಸ್‌ಗಳು, ಹವಾನಿಯಂತ್ರಿತ ವಜ್ರ ಬಸ್‌ಗಳು ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಯುವಜ್ರ ಬಸ್‌ಗಳ ಟಿಕೆಟ್ ದರವನ್ನು ಪರಿಷ್ಕರಿಸಿದೆ. ಹೊಸ ದರಗಳು ನವೆಂಬರ್ 5ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ. … Read more