ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಚಿಂತೆ ಬಿಡಿ: ಉಚಿತ ಕನೆಕ್ಷನ್, ಸ್ಟವ್ ಜೊತೆ ನಿಮ್ಮ ಅಕೌಂಟ್ ಗೆ ಬರುತ್ತೆ ₹300! ಯಾರಿಗೆ ಸಿಗುತ್ತೆ ಈ ಬಂಪರ್ ಕೊಡುಗೆ?

ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾದಾಗ ಬರುವ ಟೆನ್ಶನ್ ಅಷ್ಟಿಷ್ಟಲ್ಲ, ಅದರಲ್ಲೂ ಬೆಲೆ ಏರಿಕೆಯ ಈ ಕಾಲದಲ್ಲಿ ಮಧ್ಯಮ ಮತ್ತು ಬಡ ಕುಟುಂಬಗಳಿಗೆ ಸಿಲಿಂಡರ್ ಖರೀದಿಸುವುದು ದೊಡ್ಡ ಹೊರೆಯಾಗಿದೆ. ಆದರೆ, ಈಗ ಚಿಂತೆ ಬಿಡಿ, ಕೇಂದ್ರ ಸರ್ಕಾರವು ಮಹಿಳೆಯರ ಕಣ್ಣೀರನ್ನು ಒರೆಸಲು ಮತ್ತು ಅವರ ಆರೋಗ್ಯ ಕಾಪಾಡಲು ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0’ (PMUY 2.0) ಮೂಲಕ ಹೊಸ ಘೋಷಣೇಯನ್ನು ಮಾಡಿದೆ.

Pradhan Mantri Ujwala Yojana 2.0

ನೀವು ಇದುವರೆಗೂ ಗ್ಯಾಸ್ ಕನೆಕ್ಷನ್ ಹೊಂದಿಲ್ಲದಿದ್ದರೆ, ಇದು ನಿಮಗೆ ಸುವರ್ಣಾವಕಾಶ. ಕೇವಲ ಕನೆಕ್ಷನ್ ಮಾತ್ರವಲ್ಲ, ಸರ್ಕಾರವು ನಿಮ್ಮ ಅಡುಗೆ ಮನೆಗೆ ಬೇಕಾದ ಸಂಪೂರ್ಣ ಕಿಟ್ ಅನ್ನು ಉಚಿತವಾಗಿ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಹಾಗಾದರೆ ಈ ಯೋಜನೆಯಲ್ಲಿ ಏನೆಲ್ಲಾ ಸಿಗಲಿದೆ? ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…

1. ಇದು ಕೇವಲ ಕನೆಕ್ಷನ್ ಅಲ್ಲ, ನಿಮ್ಮ ಅಡುಗೆ ಮನೆಗೆ ಒಂದು ಹೊಸ ಕಳೆ.

ಸಾಮಾನ್ಯವಾಗಿ ಹೊಸ ಗ್ಯಾಸ್ ಕನೆಕ್ಷನ್ ಪಡೆಯಬೇಕಾದರೆ ಸಾವಿರಾರು ರೂಪಾಯಿ ಠೇವಣಿ (Deposit) ಇಡಬೇಕು. ಆದರೆ ಉಜ್ವಲ 2.0 ಯೋಜನೆಯಲ್ಲಿ:

  • ಠೇವಣಿ ರಹಿತ ಸಂಪರ್ಕ: ನೀವು ಗ್ಯಾಸ್ ಏಜೆನ್ಸಿಗೆ ಒಂದು ರೂಪಾಯಿ ಹಣವನ್ನೂ ನೀಡುವಂತಿಲ್ಲ.
  • ಸಿಲಿಂಡರ್ ಉಚಿತ: ಮೊದಲ ಬಾರಿ ಅಡುಗೆ ಅನಿಲ ತುಂಬಿದ ಸಿಲಿಂಡರ್ ಸಂಪೂರ್ಣ ಉಚಿತವಾಗಿ ಸಿಗಲಿದೆ.
  • ಡಬಲ್ ಬರ್ನರ್ ಗ್ಯಾಸ್ ಸ್ಟವ್: ಸರ್ಕಾರವೇ ನಿಮಗೆ ಉತ್ತಮ ಗುಣಮಟ್ಟದ ಎರಡು ಒಲೆಗಳನ್ನು ಒಳಗೊಂಡ ಗ್ಯಾಸ್ ಸ್ಟೌವ್ ನೀಡಲಾಗುತ್ತದೆ.
  • ಸಂಪೂರ್ಣ ಸುರಕ್ಷತಾ ಕಿಟ್: ರೆಗ್ಯುಲೇಟರ್, ಸುರಕ್ಷಾ ಹೋಸ್ ಪೈಪ್ ಮತ್ತು ಬ್ಲೂ ಬುಕ್ (ಪಾಸ್‌ಬುಕ್) ಎಲ್ಲವೂ ಫ್ರೀ.

2. ಪ್ರತಿ ತಿಂಗಳು ನಿಮ್ಮ ಅಕೌಂಟ್‌ಗೆ ಜಮೆಯಾಗಲಿದೆ ₹300.

ಸಿಲಿಂಡರ್ ಬೆಲೆ ಹೆಚ್ಚಾದಾಗ ನಿಮ್ಮ ಕೈ ಹಿಡಿಯಲು ಸರ್ಕಾರ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿದೆ. ಈ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ ರೀಫಿಲ್ ಮಾಡಿದಾಗ 300 ರೂಪಾಯಿಗಳ ಸಬ್ಸಿಡಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ (Direct Benefit Transfer – DBT) ಜಮೆಯಾಗುತ್ತದೆ. ವರ್ಷಕ್ಕೆ 12 ಸಿಲಿಂಡರ್‌ಗಳವರೆಗೆ ಈ ಬಂಪರ್ ರಿಯಾಯಿತಿ ಸಿಗಲಿದೆ.

3. ರೇಷನ್ ಕಾರ್ಡ್ ಇಲ್ಲದಿದ್ದರೂ ಸಿಗುತ್ತೆ ಗ್ಯಾಸ್.

ಹಲವರು ಕೆಲಸದ ನಿಮಿತ್ತ ಬೇರೆ ಜಿಲ್ಲೆ ಅಥವಾ ರಾಜ್ಯಗಳಿಗೆ ವಲಸೆ ಹೋಗಿರುತ್ತಾರೆ. ಅಲ್ಲಿ ಅವರಿಗೆ ಸ್ಥಳೀಯ ರೇಷನ್ ಕಾರ್ಡ್ ಅಥವಾ ಅಡ್ರೆಸ್ ಪ್ರೂಫ್ ಇರುವುದಿಲ್ಲ. ಅಂತಹವರಿಗೆ ಉಜ್ವಲ 2.0 ವರದಾನವಾಗಿದೆ.

  • ನಿಮ್ಮ ಬಳಿ ರೇಷನ್ ಕಾರ್ಡ್ ಇಲ್ಲದಿದ್ದರೆ ಚಿಂತಿಸಬೇಡಿ.
  • ನೀವು ಈಗ ವಾಸಿಸುತ್ತಿರುವ ವಿಳಾಸದ ಬಗ್ಗೆ ಒಂದು ‘ಸ್ವಯಂ ಘೋಷಣಾ ಪತ್ರ’ (Self-Declaration) ನೀಡಿದರೆ ಸಾಕು. ನಿಮ್ಮ ಈಗಿನ ವಿಳಾಸಕ್ಕೆ ಗ್ಯಾಸ್ ಕನೆಕ್ಷನ್ ನೀಡಲಾಗುತ್ತದೆ.

ಈ ಯೋಜನೆಯ ಲಾಭ ಪಡೆಯಲು ಯಾರು ಅರ್ಹರು?

  • ಅರ್ಜಿದಾರರು ಕಡ್ಡಾಯವಾಗಿ ಮಹಿಳೆಯೇ ಆಗಿರಬೇಕು (ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು).
  • ಕುಟುಂಬವು ಬಡತನ ರೇಖೆಗಿಂತ ಕೆಳಗಿರಬೇಕು (BPL Card Holders).
  • SC, ST, ಅತ್ಯಂತ ಹಿಂದುಳಿದ ವರ್ಗಗಳು (MBC), ಅಂತ್ಯೋದಯ ಅನ್ನಭಾಗ್ಯ ಯೋಜನೆ ಅಥವಾ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯ ಫಲಾನುಭವಿಗಳಿಗೆ ಮೊದಲ ಆದ್ಯತೆ.
  • ಅತಿ ಮುಖ್ಯವಾಗಿ, ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ರೇಷನ್ ಕಾರ್ಡ್‌ನಲ್ಲಿರುವ ಯಾವುದೇ ಸದಸ್ಯರ ಹೆಸರಿನಲ್ಲಿ ಈ ಹಿಂದೆ ಯಾವುದೇ ಗ್ಯಾಸ್ ಕನೆಕ್ಷನ್ ಇರಬಾರದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಅರ್ಜಿದಾರ ಮಹಿಳೆಯ ಆಧಾರ್ ಕಾರ್ಡ್.
  • ಬ್ಯಾಂಕ್ ಖಾತೆಯ ಪಾಸ್‌ಬುಕ್ (ಸಬ್ಸಿಡಿ ಹಣ ಜಮೆಯಾಗಲು).
  • ರೇಷನ್ ಕಾರ್ಡ್ (ಇಲ್ಲದಿದ್ದರೆ ಸ್ವಯಂ ಘೋಷಣಾ ಪತ್ರ).
  • ಅರ್ಜಿದಾರ ಮಹಿಳೆಯ ಫೋಟೋ.

ಅರ್ಜಿ ಸಲ್ಲಿಸುವುದು ಹೇಗೆ?

ನೀವು ನಿಮ್ಮ ಹತ್ತಿರದ ಎಲ್‌ಪಿಜಿ ವಿತರಕರ (Indane, HP, Bharat Gas) ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬಹುದು ಅಥವಾ ‘pmuy.gov.in‘ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿಯೂ ಸುಲಭವಾಗಿ ಅರ್ಜಿ ಹಾಕಬಹುದು.

ಈ ಕೂಡಲೇ ಈ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರು ಮತ್ತು ವಾಟ್ಸಾಪ್ ಗ್ರೂಪ್‌ಗಳಿಗೆ ಶೇರ್ ಮಾಡಿ, ಅರ್ಹ ಬಡ ಕುಟುಂಬಗಳಿಗೆ ಸರ್ಕಾರದ ಈ ಯೋಜನೆಯ ಲಾಭ ಸಿಗುವಂತೆ ಮಾಡಿ.

Leave a Comment