ಬ್ಯಾಂಕ್ ಖಾತೆ ತೆರೆಯಬೇಕೆ? ಚಿನ್ನ ಖರೀದಿಸಬೇಕೆ? ಅಥವಾ ಹೊಸ ಆಸ್ತಿ ನಿಮ್ಮ ಹೆಸರಿಗೆ ನೋಂದಣಿ ಮಾಡಿಸಬೇಕೆ? ಎಲ್ಲದಕ್ಕೂ ಪ್ಯಾನ್ ಕಾರ್ಡ್ (PAN Card) ಅನಿವಾರ್ಯ. ಇದುವರೆಗೆ ಕೇವಲ ಆಧಾರ್ ಕಾರ್ಡ್ ನೀಡಿ ಸುಲಭವಾಗಿ ಪ್ಯಾನ್ ಪಡೆಯುತ್ತಿದ್ದ ಕಾಲ ಇನ್ನು ನೆನಪು ಮಾತ್ರ. ಬರುವ ಏಪ್ರಿಲ್ 1, 2026 ರಿಂದ ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಅರ್ಜಿ ಪ್ರಕ್ರಿಯೆಯಲ್ಲಿ ಕಠಿಣ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ.

ಬರೀ ಆಧಾರ್ ಕಾರ್ಡ್ ಇದ್ದರೆ ಪ್ಯಾನ್ ಸಿಗಲ್ಲ! ಏಕೆ ಗೊತ್ತಾ?
ಇದುವರೆಗೂ ಹೊಸ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಅನ್ನೇ ಜನ್ಮ ದಿನಾಂಕದ (DOB) ಪುರಾವೆಯಾಗಿ ಸ್ವೀಕರಿಸಲಾಗುತ್ತಿತ್ತು. ಆದರೆ ಹೊಸ ಆರ್ಥಿಕ ವರ್ಷದಿಂದ (2026-27), ಕೇವಲ ಆಧಾರ್ ಕಾರ್ಡ್ ಅನ್ನು ಜನ್ಮ ದಿನಾಂಕದ ಅಧಿಕೃತ ದಾಖಲೆಯಾಗಿ ಪರಿಗಣಿಸುವುದಿಲ್ಲ. ಇದರೊಂದಿಗೆ ನೀವು ಹೆಚ್ಚುವರಿಯಾಗಿ ಮತ್ತೊಂದು ಸರ್ಕಾರಿ ದಾಖಲೆಯನ್ನು ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ.
ಇವುಗಳಲ್ಲಿ ಒಂದು ದಾಖಲೆ ನಿಮ್ಮ ಬಳಿ ಇರಲೇಬೇಕು:
ನಿಮ್ಮ ಜನ್ಮ ದಿನಾಂಕ ಸರಿಯಾಗಿದೆ ಎಂದು ಸಾಬೀತುಪಡಿಸಲು ಈ ಕೆಳಗಿನ ಯಾವುದಾದರೂ ಒಂದು ಮೂಲ ದಾಖಲೆಯನ್ನು ನೀವು ಅರ್ಜಿಯ ಜೊತೆ ನೀಡಬೇಕು:
- ಎಸ್ಎಸ್ಎಲ್ಸಿ (SSLC) ಅಂಕಪಟ್ಟಿ
- ಜನನ ಪ್ರಮಾಣಪತ್ರ (Birth Certificate)
- ಡ್ರೈವಿಂಗ್ ಲೈಸೆನ್ಸ್ (DL)
- ಮತದಾರರ ಗುರುತಿನ ಚೀಟಿ (Voter ID)
- ಪಾಸ್ಪೋರ್ಟ್ (Passport)
ಅಕ್ಷರ ತಪ್ಪಿದ್ರೆ ಅಪ್ಲಿಕೇಶನ್ ರಿಜೆಕ್ಟ್:
ಹೊಸ ನಿಯಮದ ಅನ್ವಯ, ನಿಮ್ಮ ಆಧಾರ್ ಕಾರ್ಡ್ನಲ್ಲಿರುವ ಹೆಸರು ಮತ್ತು ನೀವು ಪ್ಯಾನ್ ಅರ್ಜಿಯಲ್ಲಿ ತುಂಬುವ ಹೆಸರು “ಅಕ್ಷರಶಃ” ಮ್ಯಾಚ್ ಆಗಿರಬೇಕು. ಉದಾಹರಣೆಗೆ, ಆಧಾರ್ನಲ್ಲಿ ನಿಮ್ಮ ಹೆಸರು ‘Raghavendra’ ಎಂದಿದ್ದು, ಅರ್ಜಿಯಲ್ಲಿ ‘Raghavendra Rao’ ಎಂದು ಬರೆದರೆ ಅಥವಾ ಸ್ಪೆಲ್ಲಿಂಗ್ನಲ್ಲಿ ಒಂದು ಸಣ್ಣ ಅಕ್ಷರ ವ್ಯತ್ಯಾಸವಾದರೂ ನಿಮ್ಮ ಅರ್ಜಿ ತಕ್ಷಣವೇ ತಿರಸ್ಕೃತಗೊಳ್ಳುತ್ತದೆ. ಇನಿಷಿಯಲ್ (Initial) ಗಳ ವಿಚಾರದಲ್ಲೂ ಯಾವುದೇ ರಾಜಿ ಇರುವುದಿಲ್ಲ.
ಹಳೆಯದು vs ಹೊಸದು:
| ವಿವರ | ಮಾರ್ಚ್ 31ರ ವರೆಗೆ (ಹಳೆ ನಿಯಮ) | ಏಪ್ರಿಲ್ 1 ರಿಂದ (ಹೊಸ ನಿಯಮ) |
| ಅಗತ್ಯ ದಾಖಲೆ | ಕೇವಲ ಆಧಾರ್ ಕಾರ್ಡ್ ಸಾಕಿತ್ತು | ಆಧಾರ್ + ಜನನ ಪುರಾವೆ ಕಡ್ಡಾಯ |
| ಹೆಸರಿನ ಹೊಂದಾಣಿಕೆ | ಸಣ್ಣ ಬದಲಾವಣೆಗಳಿಗೆ ಅವಕಾಶವಿತ್ತು | ಅಕ್ಷರಶಃ ಒಂದೇ ಇರಬೇಕು |
| ಪರಿಶೀಲನೆ | ವೇಗವಾಗಿ ನಡೆಯುತ್ತಿತ್ತು | ಕಟ್ಟುನಿಟ್ಟಾದ ಪರಿಶೀಲನೆ ಇರುತ್ತದೆ |
ಅರ್ಜಿ ಸಲ್ಲಿಸಲು ಲಿಂಕ್:
| ಹೆಚ್ಚಿನ ಮಾಹಿತಿಗಾಗಿ | ಅಪ್ಲೇ ಲಿಂಕ್ |
ನಮ್ಮ ಸಲಹೆ: ಹಣ ಮತ್ತು ಸಮಯ ಉಳಿಸಿ:
ನೀವು ಹೊಸ ಪ್ಯಾನ್ ಕಾರ್ಡ್ ಪಡೆಯಲು ಯೋಜಿಸಿದ್ದರೆ, ನಿಮ್ಮ ಕೈಯಲ್ಲಿ ಮಾರ್ಚ್ 31 ರವರೆಗೆ ಮಾತ್ರ ಹಳೆಯ ನಿಯಮದಡಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಜಿ ಸಲ್ಲಿಸುವ ಮುನ್ನ ಹೀಗೆ ಮಾಡಿ:
- ನಿಮ್ಮ ಆಧಾರ್ ಕಾರ್ಡ್ ಮತ್ತು ಎಸ್ಎಸ್ಎಲ್ಸಿ ಅಂಕಪಟ್ಟಿಯಲ್ಲಿರುವ ಹೆಸರು ಹಾಗೂ ಜನ್ಮ ದಿನಾಂಕ ಒಂದೇ ರೀತಿ ಇದೆಯೇ ಎಂದು ಪರಿಶೀಲಿಸಿ.
- ಒಂದು ವೇಳೆ ವ್ಯತ್ಯಾಸವಿದ್ದರೆ, ಮೊದಲು ಆಧಾರ್ ಕೇಂದ್ರಕ್ಕೆ ಹೋಗಿ ಹೆಸರು ಅಥವಾ ಜನ್ಮ ದಿನಾಂಕವನ್ನು ಅಪ್ಡೇಟ್ ಮಾಡಿಸಿಕೊಳ್ಳಿ.
- ಇಲ್ಲದಿದ್ದರೆ ನಿಮ್ಮ ಅಪ್ಲಿಕೇಶನ್ ಫೀಸ್ ವ್ಯರ್ಥವಾಗುವುದಲ್ಲದೆ, ಪದೇ ಪದೇ ಅಲೆಯಬೇಕಾದ ಪರಿಸ್ಥಿತಿ ಎದುರಾಗಬಹುದು.
ನೆನಪಿಡಿ: ಬದಲಾದ ನಿಯಮಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ, ಹಾಗಾಗಿ ಮುನ್ನೆಚ್ಚರಿಕೆ ವಹಿಸುವುದು ಉತ್ತಮ.