10ನೇ ತರಗತಿ ಪಾಸ್ ಆಗಿದ್ದೀರಾ? ಬಂತು ಭಾರತೀಯ ವಾಯುಪಡೆಯ ಭರ್ಜರಿ ಆಫರ್ – ಬೆಂಗಳೂರಿನಲ್ಲೇ ಕೆಲಸ!

ಬೆಂಗಳೂರು: ನೀವು 10ನೇ ತರಗತಿಯನ್ನು ಯಶಸ್ವಿಯಾಗಿ ಪೂರೈಸಿದ್ದೀರಾ? ದೇಶದ ಹೆಮ್ಮೆಯ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುವ ಕನಸು ನಿಮಗಿದೆಯೇ? ಹಾಗಾದರೆ, ಈ ಸುದ್ದಿ ನಿಮಗಾಗಿಯೇ! ಬೆಂಗಳೂರಿನ ಭಾರತೀಯ ವಾಯುಪಡೆಯ ನಿಲ್ದಾಣಗಳು ಮತ್ತು ಘಟಕಗಳಲ್ಲಿ ಖಾಲಿ ಇರುವ 06 ಗ್ರೂಪ್-ಸಿ ಮಲ್ಟಿ ಟಾಸ್ಕಿಂಗ್ ಸ್ಟಾಫ್(ಎಂಟಿಎಸ್‌) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ.

ಈ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ, ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಈ ಕೆಳಗೆ ವಿವರಿಸಲಾಗಿದೆ. ಕೊನೆಯವರೆಗೂ ಓದಿ ಮತ್ತು ಅವಕಾಶವನ್ನು ಬಳಸಿಕೊಳ್ಳಿ.

ಹುದ್ದೆಯ ವಿವರಗಳು:

  • ಹುದ್ದೆಯ ಹೆಸರು: ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್‌) – ಗ್ರೂಪ್ ಡಿ
  • ಒಟ್ಟು ಹುದ್ದೆಗಳ ಸಂಖ್ಯೆ: 06
  • ಉದ್ಯೋಗದ ಸ್ಥಳ: ಬೆಂಗಳೂರಿನ ಐಎಎಫ್‌ ಘಟಕಗಳು

ಅರ್ಹತಾ ಮಾನದಂಡಗಳು:

1. ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್(10ನೇ ತರಗತಿ) ಉತ್ತೀರ್ಣ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.

2. ವಯೋಮಿತಿ:

  • ಕನಿಷ್ಠ ವಯಸ್ಸು: 18 ವರ್ಷಗಳು
  • ಗರಿಷ್ಠ ವಯಸ್ಸು: 25 ವರ್ಷಗಳು

ವಯೋಮಿತಿ ಸಡಿಲಿಕೆ: ಸರ್ಕಾರದ ನಿಯಮಗಳಂತೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ:

  • ಒಬಿಸಿ ಅಭ್ಯರ್ಥಿಗಳಿಗೆ: 03 ವರ್ಷಗಳು
  • ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ: 05 ವರ್ಷಗಳು
  • ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ: 10 ವರ್ಷಗಳು
  • ಪಿಡಬ್ಲ್ಯೂಬಿಡಿ ಒಬಿಸಿ ಅಭ್ಯರ್ಥಿಗಳಿಗೆ: 13 ವರ್ಷಗಳು
  • ಪಿಡಬ್ಲ್ಯೂಬಿಡಿ ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ: 15 ವರ್ಷಗಳು

ವೇತನ ಮತ್ತು ಆಯ್ಕೆ ವಿಧಾನ:

ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ಸಿಪಿಸಿಪೇ ಮ್ಯಾಟ್ರಿಕ್ಸ್ ನಿಯಮಗಳ ಅನುಸಾರ ಪೆಲೆವೆಲ್ 1ರ ಅನ್ವಯ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.

ಆಯ್ಕೆ ವಿಧಾನ: ಅಭ್ಯರ್ಥಿಗಳ ಆಯ್ಕೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:

  1. ಲಿಖಿತ ಪರೀಕ್ಷೆ
  2. ವೈದ್ಯಕೀಯ ಪರೀಕ್ಷೆ
  3. ದಾಖಲೆ ಪರಿಶೀಲನೆ

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿಯನ್ನು ಅಂಚೆ ಮೂಲಕ ಸಲ್ಲಿಸಬೇಕು. ವಿಧಾನ ಈ ಕೆಳಗಿನಂತಿದೆ:

  1. ಅರ್ಜಿ ನಮೂನೆ: ಮೊದಲಿಗೆ ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ. (ಅರ್ಜಿ ನಮೂನೆ ಪಿಡಿಎಫ್‌ ಅನ್ನು Important Direct Links ಶಿರ್ಷೀಕೆಯಡಿ ನೀಡಲಾಗಿದೆ.)
  2. ಮಾಹಿತಿ ಭರ್ತಿ: ಅರ್ಜಿಯಲ್ಲಿ ಕೇಳಲಾದ ಎಲ್ಲಾ ಸ್ವಯಂ ವಿವರಗಳನ್ನು ಸರಿಯಾಗಿ ನಮೂದಿಸಿ. ಸಹಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿ ಮತ್ತು ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
  3. ಲಕೋಟೆ ತಯಾರಿ: ಭರ್ತಿ ಮಾಡಿದ ಅರ್ಜಿಯನ್ನು ಲಕೋಟೆಯಲ್ಲಿ ಹಾಕಿ. ಲಕೋಟೆಯ ಮೇಲೆ ಸ್ಪಷ್ಟವಾಗಿ “_____ ವರ್ಗದ ____ ಹುದ್ದೆಗೆ ಅರ್ಜಿ” ಎಂದು ನಮೂದಿಸಿ.
  4. ಸ್ವಯಂ ವಿಳಾಸವಿರುವ ಲಕೋಟೆ: ಅರ್ಜಿಯೊಂದಿಗೆ ರೂ.10 ಸ್ಟ್ಯಾಂಪ್ ಹಚ್ಚಿದ, ನಿಮ್ಮ ಸ್ವಯಂ ವಿಳಾಸವಿರುವ ಮತ್ತೊಂದು ಲಕೋಟೆಯನ್ನು ಕಡ್ಡಾಯವಾಗಿ ಇಡಬೇಕು.

ಅರ್ಜಿ ಕಳುಹಿಸಬೇಕಾದ ವಿಳಾಸ:ಕಮಾಂಡೆಂಟ್, ಟಿಎಎಂ, ಐಎಎಫ್‌ ವಿಮಾನಪುರ ಪಿಒ ಬೆಂಗಳೂರು 560017

ಪ್ರಮುಖ ದಿನಾಂಕಗಳು:

  • ಉದ್ಯೋಗ ಸೂಚನೆ ಪ್ರಕಟಣೆಯ ದಿನಾಂಕ: ಜೂನ್ 27, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಉದ್ಯೋಗ ಜಾಹೀರಾತಿನಲ್ಲಿ ಈ ಸುತ್ತೋಲೆ ಪ್ರಕಟವಾದ 30 ದಿನಗಳ ಒಳಗೆ (ಜುಲೈ 27, 2026). ನಿಮ್ಮ ಅರ್ಜಿ ಈ ದಿನಾಂಕದೊಳಗೆ ನಿಗದಿತ ವಿಳಾಸಕ್ಕೆ ತಲುಪಿರಬೇಕು.

ಈ ಸುವರ್ಣ ಅವಕಾಶವನ್ನು ಕಳೆದುಕೊಳ್ಳಬೇಡಿ. ತಕ್ಷಣವೇ ಅರ್ಜಿ ಸಲ್ಲಿಸಿ! ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ.

Leave a Comment